News Kannada
Tuesday, February 07 2023

ವಿದೇಶ

ಆಫ್ಘಾನಿಸ್ತಾನದ ತಾಲಿಬಾನ್ ನೀತಿಗೆ ಮಲಾಲ ವಿರೋಧ

Photo Credit :

ಲಂಡನ್​: ಭಯೊತ್ಪಾದಕತೆ ವಿರುದ್ಧ ಹೋರಾಟ ನಡೆಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಪಾಕಿಸ್ತಾನ ಮೂಲದ ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್​​ಝಾಯ್​ ಸದ್ಯ ತಾಲಿಬಾನ್​ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಹಿಜಾಬ್​ ಕಡ್ಡಾಯಗೊಳಿಸಿ ತಾಲಿಬಾನ್​ ಆದೇಶ ಹೊರಡಿಸಿತ್ತು.

ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಲಾಲ ಇದು ಮಹಿಳೆಯರನ್ನು ಕೆಲಸದಿಂದ ದೂರವಿಡಲು ಈ ತಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ತಾಲಿಬಾನ್​ , ಅಫ್ಘಾನಿಸ್ತಾನದ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಅಳಿಸಲು ಹೊರಟಿದೆ. ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಡಲು ಹಾಗೂ ಮಹಿಳೆಯರನ್ನು ಕೆಲಸದಿಂದ ದೂರವಿಡಲು ಒಟ್ಟಾರೆ ಸಂಪೂರ್ಣವಾಗಿ ಮಹಿಳೆಯರನ್ನು ಅಳಿಸಿಹಾಕಲು ಈ ನಿಯಮ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಅಫ್ಘಾನಿಸ್ತಾನದಲ್ಲಿ ಕುಟುಂಬದ ಪುರುಷರಿಲ್ಲದೇ ಮಹಿಳೆಯರು ಎಲ್ಲೂ ಪ್ರಯಾಣಿಸುವಂತೆಯೂ ಇಲ್ಲ, ಮನೆಯಿಂದ ಹೊರಬಂದಾಗ ಸಂಪೂರ್ಣವಾಗಿ ತಮ್ಮ ಮುಖ ಸೇರಿದಂತೆ ದೇಹವನ್ನು ಮುಚ್ಚಬೇಕೆಂಬ ಕಠಿಣ ನೀತಿಯನ್ನು ತಾಲಿಬಾನ್​ ಸರ್ಕಾರ ಜಾರಿಗೊಳಿಸಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕತೆ ವಿರುದ್ಧ ಹೋರಾಡಿ, ಭಯೋತ್ಪಾದಕರಿಂದ ಹಲ್ಲೆಗೊಳಗಾದ ಬಳಿಕ ಹೆಣ್ಣುಮಕ್ಕಳ ಪರ ಹೋರಾಟಗಾರ್ತಿ ಮಲಾಲ ಸದ್ಯ ಲಂಡನ್​ನಲ್ಲಿ ನೆಲೆಸಿದ್ದಾರೆ.

See also  ಉತ್ತರ ಬುರ್ಕಿನಾ ಫಾಸೊ ದಾಳಿ ಕನಿಷ್ಠ 20 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು