ಟ್ಯುನಿಸ್: ಟ್ಯುನೀಶಿಯಾದ ಆಗ್ನೇಯ ಕರಾವಳಿಯ ಬಳಿಯ ಕೆರ್ಕೆನ್ ನ ದ್ವೀಪದಲ್ಲಿ 30 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಎಂಟು ವಲಸಿಗರು ಮೃತಪಟ್ಟಿದ್ದು, ಇಬ್ಬರು ಕಾಣೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬುಧವಾರ, ಭದ್ರತಾ ಸಿಬ್ಬಂದಿ ಕೆರ್ಕೆನ್ನಾ ಕರಾವಳಿಯಲ್ಲಿ ಎರಡು ಶವಗಳನ್ನು ಹೊರತೆಗೆದಿದ್ದು, ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿದೆ ಎಂದು ಬುಧವಾರ ಪ್ರಕಟವಾದ ವರದಿ ತಿಳಿಸಿದೆ.
ಈವರೆಗೆ 20 ಜನರನ್ನು ರಕ್ಷಿಸಲಾಗಿದ್ದು, ಕಾಣೆಯಾದವರಿಗಾಗಿ ಶೋಧ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಮಧ್ಯ ಮೆಡಿಟರೇನಿಯನ್ ನಲ್ಲಿರುವ ಟ್ಯುನೀಷಿಯಾ ಯುರೋಪ್ ಗೆ ಅಕ್ರಮವಾಗಿ ವಲಸೆ ಹೋಗುವ ಅತ್ಯಂತ ಜನಪ್ರಿಯ ಸಾರಿಗೆ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಸಮಸ್ಯೆಯನ್ನು ನಿಭಾಯಿಸಲು ಟ್ಯುನೀಷಿಯಾದ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಟುನೀಷಿಯಾದಿಂದ ಇಟಲಿಗೆ ಅಕ್ರಮ ವಲಸೆ ಪ್ರಯತ್ನಗಳ ಸಂಖ್ಯೆ ಹೆಚ್ಚಾಗಿದೆ.