ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ರಾಜಧಾನಿ ಬಾಂಡುಂಗ್ ನ ಪೊಲೀಸ್ ಠಾಣೆಯಲ್ಲಿ ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಬಾಂಬರ್ ಮೃತಪಟ್ಟು ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಅಸ್ತಾನಾ ಅನ್ಯಾರ್ ಉಪ-ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ 8.20 ಕ್ಕೆ ಸ್ಫೋಟ ಸಂಭವಿಸಿದೆ ಎಂದು ಬಂಡುಂಗ್ ಪೊಲೀಸ್ ಮುಖ್ಯಸ್ಥ ಅಶ್ವಿನ್ ಸಿಪಾಯುಂಗ್ ತಿಳಿಸಿದ್ದಾರೆ.
“ಪೊಲೀಸರು ನಿಯಮಿತವಾಗಿ ಸಮಾರಂಭ ನಡೆಸುತ್ತಿದ್ದಾಗ ಬಾಂಬರ್ ಪೊಲೀಸ್ ಠಾಣೆಗೆ ಬಂದನು. ಬಾಂಬರ್ ಪೊಲೀಸರತ್ತ ಚಾಕು ತೋರಿಸಿದನು. ನಂತರ ಸ್ಫೋಟ ಸಂಭವಿಸಿತು” ಎಂದು ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.