News Kannada
Monday, September 25 2023
ವಿದೇಶ

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ರಸ್ತೆ ಅಪಘಾತ, 6 ಸಾವು

woman-killed-in-bike-car-accident-in-mulki
Photo Credit : Pixabay

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಉತ್ತರ ಪ್ರಾಂತ್ಯದ ಲಿಂಪೋಪೊದಲ್ಲಿ ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.

ಬೆಳಿಗ್ಗೆ ವ್ಹೆಂಬೆ ಜಿಲ್ಲೆಯ ಎನ್ 1.29 ಉತ್ತರದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟ ಆರು ಮಂದಿಯಲ್ಲಿ ಮಗು, 35 ವರ್ಷದ ಚಾಲಕ ಮತ್ತು 8 ರಿಂದ 15 ವರ್ಷದೊಳಗಿನ ನಾಲ್ವರು ಪ್ರಯಾಣಿಕರು ಸೇರಿದ್ದಾರೆ ಎಂದು ಸಾರಿಗೆ ಮತ್ತು ಸಮುದಾಯ ಸುರಕ್ಷತೆ ಕಾರ್ಯಕಾರಿ ಮಂಡಳಿಯ ಸದಸ್ಯ ಫ್ಲಾರೆನ್ಸ್ ರಾಡ್ಜಿಲಾನಿ ಹೇಳಿದ್ದಾರೆ ಎಂದು ಮಾಧ್ಯಮಗಳು  ವರದಿ ಮಾಡಿದೆ.

ರಾಡ್ಜಿಲಾನಿ ಅವರ ಪ್ರಕಾರ, ಘಟನಾ ಸ್ಥಳದಲ್ಲಿದ್ದ ಕಾನೂನು ಜಾರಿ ಅಧಿಕಾರಿಗಳು ವೇಗವೇ ಅಪಘಾತಕ್ಕೆ ಸಂಭಾವ್ಯ ಕಾರಣ ಎಂದು ಉಲ್ಲೇಖಿಸಿದ್ದಾರೆ.

“ರಸ್ತೆಯ ನಿಯಮಗಳನ್ನು ಪಾಲಿಸುವಂತೆ ನಾವು ಎಲ್ಲಾ ವಾಹನ ಚಾಲಕರಿಗೆ ಮನವಿ ಮಾಡುತ್ತಲೇ ಇದ್ದೇವೆ” ಎಂದು ಅವರು ಹೇಳಿದರು.

See also  ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿ ಎಂದ ಗೃಹ ಸಚಿವ ಅಮಿತ್ ಶಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು